Sunday 4 March, 2007

ಆರಂಭ - A beginning

ಬಹಳ ದಿನಗಳ ಬಯಕೆ - ಬರೆಯುವುದನ್ನು ಹವ್ಯಾಸವಾಗಿ ರೂಢಿಸಿಕೊಳ್ಳಬೇಕೆನ್ನುವುದು. ಎಲ್ಲರೂ ಹಾದು ಹೊಯ್ದ ಹಾದಿಯನ್ನೇ ನಾನೂ ಅನುಸರಿಸಿದೆ. ಆಂಗ್ಲ ಭಾಷೆಯಲ್ಲಿ blog ಆರಂಭಿಸಿದೆ. ಒಂದಿಷ್ಟು ಬಾರಿ ಬರೆದಿದ್ದೂ ಉಂಟು. ಆದರೆ ಎಲ್ಲೋ ಮನಸ್ಸಿನಾಳದಲ್ಲಿ ಒಂದು ಬಯಕೆ. ಕನ್ನಡದಲ್ಲಿ ಯೋಚನೆ ಮಾಡುವಾಗ, ಅದನ್ನು ಕನ್ನಡದಲ್ಲಿಯೇ ಪ್ರಕಟಿಸಬೇಕೆನ್ನುವುದು.
ಸರಿ, ಮನಸ್ಸಿನ ಬಯಕೆಯನ್ನು ಅಸ್ತಿತ್ವಕ್ಕೆ ತರಲು ಸಕಲ ಸಿದ್ಧತೆಗಳು ಬೇಕಲ್ಲವೇ? ಅಂತಹುದರಲ್ಲಿ ಮೊದಲನೆಯದು ನಾಮಧೇಯ. ಇದಕ್ಕೆಂದೇ ಬಹಳ ದಿನಗಳು ತಲೆ ಕೆಡಿಸಿಕೊಂಡೆ. ಕೆಲವು ಹೆಸರುಗಳು ಹೊಳೆದಿದ್ದೂ ಉಂಟು - ದುಂದುಭಿ, ತುಂತುರು, ಇಂಚರ ಮುಂತಾದವು. ನಾನು ಈ ಹೆಸರುಗಳನ್ನು ನೊಂದಾಯಿಸುವಷ್ಟರಲ್ಲಿ ಬೇರೆಯವರು ನೊಂದಣಿ ಮಾಡಿದ್ದುದು ಕಂಡು ಬಂದಿತು.
ಕಡೆಗೆ, ಮನಸ್ಸಿಗೆ ಗೋಚರವಾದ ಹೆಸರು - ಪ್ರಸ್ತಾಪ. ಸೂಕ್ತವಾದ ಶೀರ್ಷಿಕೆ ಅನ್ನಿಸಿತು. ಮನಸ್ಸಿನಾಳದ ದನಿಯೊಂದಿಗಿನ ಪ್ರಸ್ತಾಪಗಳು ಹೊರಹೊಮ್ಮಿದಾಗ ಮೂಡುವುದೇ ಈ -

ಪ್ರಸ್ತಾಪ

3 comments:

sumanth said...

ನಮಸ್ಕರ ಕಿಶೊರ್ ಅವರೆ. ನಿಮ್ಮ ಮುನ್ನುಡಿ ಬಹಳ ಸೊಗಸಾಗಿ ಮೂಡಿ ಬ೦ದಿದೆ. ಈ ನಿಮ್ಮ blog ಚೆನ್ನಾಗಿ ಮೂಡಿ ಬರಲಿ.

Shankar said...

ಅತಿ ಶೀಘ್ರದಲ್ಲಿ ನಿಮ್ಮ ಮುಂದಿನ post ಬರಲಿ ಎಂದು ಆಶಿಸುತ್ತ ನಿಮ್ಮ ಈ blogಗಿಗೆ ಶುಭ ಕೋರುತ್ತೇನೆ.

Divya said...

Hi Kishor,
I am sorry to leave a english comment in your kannada blog! But I have to comment! :-)

The "Aarambha" is good and I hope it continues with interesting thought provocating blogs. keep this going ..

BTW does anyone know what is "blog" in kannada?