ರಚನೆ: ರಾಷ್ಟ್ರಕವಿ ಕುವೆಂಪು
ತನುವು ನಿನ್ನದು ಮನವು ನಿನ್ನದು
ತನುವು ನಿನ್ನದು ಮನವು ನಿನ್ನದು
ಎನ್ನ ಜೀವನ ಧನವು ನಿನ್ನದು
ತನುವು ನಿನ್ನದು ಮನವು ನಿನ್ನದು
ಎನ್ನ ಜೀವನ ಧನವು ನಿನ್ನದು
ನಾನು ನಿನ್ನವನೆಂಬ ಹೆಮ್ಮೆಯ
ತೃಣವು ಮಾತ್ರವೇ ನನ್ನದು
ತನುವು ನಿನ್ನದು ಮನವು ನಿನ್ನದು
ನೀನು ಹೊಳೆದರೆ ನಾನು ಹೊಳೆವೆನು
ನೀನು ಬೆಳೆದರೆ ನಾನು ಬೆಳೆವೆನು
ನೀನು ಹೊಳೆದರೆ ನಾನು ಹೊಳೆವೆನು
ನೀನು ಬೆಳೆದರೆ ನಾನು ಬೆಳೆವೆನು
ನನ್ನ ಹರಣದ ಹರಣ ನೀನು
ನನ್ನ ಮರಣದ ಮರಣವು
ನನ್ನ ಮರಣದ ಮರಣವು
ತನುವು ನಿನ್ನದು ಮನವು ನಿನ್ನದು
ಎನ್ನ ಜೀವನ ಧನವು ನಿನ್ನದು
ನಾನು ನಿನ್ನವನೆಂಬ ಹೆಮ್ಮೆಯ
ತೃಣವು ಮಾತ್ರವೆ ನನ್ನದು
ನನ್ನ ಮನದಲಿ ನೀನೆ ಯುಕ್ತಿ
ನನ್ನ ಹೃದಯದಿ ನೀನೆ ಭಕ್ತಿ
ನನ್ನ ಮನದಲಿ ನೀನೆ ಯುಕ್ತಿ
ನನ್ನ ಹೃದಯದಿ ನೀನೆ ಭಕ
ನೀನೆ ಮಾಯಾ ಮೋಹ ಶಕ್ತಿಯು
ಎನ್ನ ಜೀವನ ಮುಕ್ತಿಯು
ಎನ್ನ ಜೀವನ ಮುಕ್ತಿಯು
ತನುವು ನಿನ್ನದು ಮನವು ನಿನ್ನದು
ಎನ್ನ ಜೀವನ ಧನವು ನಿನ್ನದು
ನಾನು ನಿನ್ನವನೆಂಬ ಹೆಮ್ಮೆಯ
ತೃಣವು ಮಾತ್ರವೆ ನನ್ನದು
ತನುವು ನಿನ್ನದು ತನುವು ನಿನ್ನದು ತನುವು ನಿನ್ನದು ಮನವು ನಿನ್ನದು
ಅರ್ಪಣೆಯ ಬಗ್ಗೆ ಇದಕ್ಕಿಂತ ಸೊಗಸಾದ ಕವಿತೆ ಮತ್ತೊಂದು ಇರಲಾರದೇನೋ. ಇಲ್ಲಿ ಕಾಣಸಿಗುವುದು ಎರಡು ಅಂಶಗಳು -
ತನ್ನ ಜೀವನದ ಅಸ್ತಿತ್ವವೇ ನಿನ್ನಿಂದ, ತನ್ನ ಬಾಳ್ವೆಯೇ ನಿನ್ನಿಂದ ಎನ್ನುವುದನ್ನು ಅರಿತುಕೊಳ್ಳುವುದು ಒಂದು
ಮತ್ತೊಂದು, ಆ ಅರಿವನ್ನು ಸಾರಿ ಹೇಳಿವುದು
ಆ ಅರಿವು ಮೂಡಿದಾಗ ಮನದೊಳಗೆ ಆಗುವ ಸಂತೃಪ್ತಿ ಇನ್ನೊಂದೆಡೆ. ತನ್ನನ್ನು ತಾನು ಅರ್ಪಿಸಿಕೊಂಡಾಗಲೇ ತನ್ನ ಜೀವನ ಪರಿಪೂರ್ಣ ಎಂಬ ಮನೋಭಾವ ಕವಿಯದ್ದು.
Sunday, 18 March 2007
Subscribe to:
Post Comments (Atom)
2 comments:
ಆಹಾ!!! ತುಂಬಾ ದಿನಗಳಾದ ಮೇಲೆ ಈ ಕಂಪುಟರ್ ಸ್ಕ್ರೀನ್ ಮೇಲೆ ಕನ್ನಡ ನೋಡಿ ತುಂಬಾ ಸಂತೋಷ ಆಯಿತು. ಅದಕ್ಕೆ ಸರಿಯಾಗಿ ಇದು ನನ್ನ ಅಚ್ಚು ಮೆಚ್ಚಿನ ಗೀತೆ. ಧನ್ಯವಾದಗಳು
ಇದು ನನ್ನ ಅಚ್ಚು ಮೆಚ್ಚಿನ ಗೀತೆ ಕೂಡ. ಕೆಳಿದಾಗೆಲ್ಲ ಮನದಲ್ಲಿ ಹೆಳದಾಗದ೦ತಹ ಭಾವನೆ ಮೂಡಿ ಬರುತ್ತದೆ.
Post a Comment